The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesHud [Hud] - Kannada translation - Hamza Butur - Ayah 17
Surah Hud [Hud] Ayah 123 Location Maccah Number 11
أَفَمَن كَانَ عَلَىٰ بَيِّنَةٖ مِّن رَّبِّهِۦ وَيَتۡلُوهُ شَاهِدٞ مِّنۡهُ وَمِن قَبۡلِهِۦ كِتَٰبُ مُوسَىٰٓ إِمَامٗا وَرَحۡمَةًۚ أُوْلَٰٓئِكَ يُؤۡمِنُونَ بِهِۦۚ وَمَن يَكۡفُرۡ بِهِۦ مِنَ ٱلۡأَحۡزَابِ فَٱلنَّارُ مَوۡعِدُهُۥۚ فَلَا تَكُ فِي مِرۡيَةٖ مِّنۡهُۚ إِنَّهُ ٱلۡحَقُّ مِن رَّبِّكَ وَلَٰكِنَّ أَكۡثَرَ ٱلنَّاسِ لَا يُؤۡمِنُونَ [١٧]
ಒಬ್ಬ ವ್ಯಕ್ತಿ ತನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಪುರಾವೆಯ ಆಧಾರದಲ್ಲಿದ್ದಾನೆ.[1] ಅದರ ಹಿಂದೆ ಇನ್ನೊಂದು ಸಾಕ್ಷಿಯಿದೆ.[2] ಇದಕ್ಕೆ ಮೊದಲು ಮಾರ್ಗದರ್ಶಿ ಮತ್ತು ದಯೆಯಾಗಿದ್ದ ಮೂಸಾರ ಗ್ರಂಥವು ಕೂಡ ಆ ಸಾಕ್ಷಿಯನ್ನು ಬೆಂಬಲಿಸುತ್ತದೆ.[3] ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. ವಿವಿಧ ಪಂಗಡಗಳಲ್ಲಿ ಯಾರು ಅದನ್ನು ನಿಷೇಧಿಸುತ್ತಾರೋ ಅವರಿಗೆ ವಾಗ್ದಾನ ಮಾಡಲಾದ ಸ್ಥಳವು ನರಕಾಗ್ನಿಯಾಗಿದೆ. ಆದ್ದರಿಂದ ನೀವು ಅದರ (ಕುರ್‌ಆನ್‌ನ) ಬಗ್ಗೆ ಯಾವುದೇ ಸಂಶಯವನ್ನಿಟ್ಟುಕೊಳ್ಳಬೇಡಿ. ನಿಶ್ಚಯವಾಗಿಯೂ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ.