The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesDivorce [At-Talaq] - Kannada translation - Ayah 1
Surah Divorce [At-Talaq] Ayah 12 Location Madanah Number 65
يَٰٓأَيُّهَا ٱلنَّبِيُّ إِذَا طَلَّقۡتُمُ ٱلنِّسَآءَ فَطَلِّقُوهُنَّ لِعِدَّتِهِنَّ وَأَحۡصُواْ ٱلۡعِدَّةَۖ وَٱتَّقُواْ ٱللَّهَ رَبَّكُمۡۖ لَا تُخۡرِجُوهُنَّ مِنۢ بُيُوتِهِنَّ وَلَا يَخۡرُجۡنَ إِلَّآ أَن يَأۡتِينَ بِفَٰحِشَةٖ مُّبَيِّنَةٖۚ وَتِلۡكَ حُدُودُ ٱللَّهِۚ وَمَن يَتَعَدَّ حُدُودَ ٱللَّهِ فَقَدۡ ظَلَمَ نَفۡسَهُۥۚ لَا تَدۡرِي لَعَلَّ ٱللَّهَ يُحۡدِثُ بَعۡدَ ذَٰلِكَ أَمۡرٗا [١]
ಓ ಪ್ರವಾದಿಯವರೇ! (ನಿಮ್ಮ ಅನುಯಾಯಿಗಳೊಡನೆ ಹೇಳಿರಿ): “ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ (ತಲಾಕ್) ನೀಡುವುದಾದರೆ, ಅವರ ಇದ್ದತ್‌ನ (ದೀಕ್ಷಾಕಾಲದ) ಆರಂಭವನ್ನು ಲೆಕ್ಕಹಾಕಿ ವಿಚ್ಛೇದಿಸಿರಿ[1] ಮತ್ತು ಇದ್ದತ್‌ನ ಲೆಕ್ಕವನ್ನು ಇಟ್ಟುಕೊಳ್ಳಿ. ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ. ಅವರನ್ನು ಅವರ ಮನೆಗಳಿಂದ ಹೊರಹಾಕಬೇಡಿ ಮತ್ತು ಅವರು ಕೂಡ (ಸ್ವತಃ) ಮನೆಯಿಂದ ಹೊರಹೋಗದಿರಲಿ. ಅವರು ಸ್ಪಷ್ಟ ನೀಚಕೃತ್ಯವನ್ನು ಮಾಡಿದರೆ ಹೊರತು. ಇವು ಅಲ್ಲಾಹನ ಎಲ್ಲೆಗಳಾಗಿವೆ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರುತ್ತಾನೋ ಅವನು ಸ್ವಯಂ ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹು ಇದರ ನಂತರ ಏನಾದರೂ ಹೊಸದನ್ನು ತರುವನೋ ಎಂದು ನಿಮಗೆ ತಿಳಿದಿಲ್ಲ.