The Noble Qur'an Encyclopedia
Towards providing reliable exegeses and translations of the meanings of the Noble Qur'an in the world languagesThe Cleaving [AL-Infitar] - Kannada translation
Surah The Cleaving [AL-Infitar] Ayah 19 Location Maccah Number 82
ಆಕಾಶವು ಒಡೆದು ಸೀಳುವಾಗ.
ನಕ್ಷತ್ರಗಳು ಉದುರಿ ಬೀಳುವಾಗ.
ಸಮುದ್ರಗಳು ಉಕ್ಕಿ ಹರಿಯುವಾಗ.
ಸಮಾಧಿಗಳು ಬುಡಮೇಲಾಗುವಾಗ.
ಆಗ ಮನುಷ್ಯನು ತಾನು ಮುಂದಕ್ಕೆ ಕಳುಹಿಸಿದ ಮತ್ತು ಹಿಂದೆ ಉಳಿಸಿದ (ಕರ್ಮಗಳನ್ನು) ತಿಳಿಯುವನು.
ಓ ಮನುಷ್ಯನೇ! ಅತ್ಯುದಾರಿಯಾದ ನಿನ್ನ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ನಿನ್ನನ್ನು ವಂಚಿಸಿದ್ದೇನು?
ಅವನು (ಅಲ್ಲಾಹು) ಯಾರೆಂದರೆ ನಿನ್ನನ್ನು ಸೃಷ್ಟಿಸಿದವನು, ನಿನ್ನನ್ನು ಸರಿಪಡಿಸಿದವನು ಮತ್ತು ನಿನ್ನನ್ನು ಸಮತೋಲನಗೊಳಿಸಿದವನು.
ಅವನು ಇಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದವನು.
ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೀರಿ.
ನಿಶ್ಚಯವಾಗಿಯೂ ನಿಮ್ಮ ಮೇಲೆ ನಿಗಾ ವಹಿಸುವವರಿದ್ದಾರೆ.
ಗೌರವಾನ್ವಿತ ಬರಹಗಾರರು.
ನೀವು ಮಾಡುವುದೆಲ್ಲವನ್ನೂ ಅವರು ತಿಳಿಯುತ್ತಾರೆ.
ನಿಶ್ಚಯವಾಗಿಯೂ ಸತ್ಕರ್ಮಿಗಳು ಸುಖದ ಸುಪ್ಪತ್ತಿಗೆಯಲ್ಲಿರುವರು.
ನಿಶ್ಚಯವಾಗಿಯೂ ದುಷ್ಕರ್ಮಿಗಳು ಧಗಧಗಿಸುವ ನರಕದಲ್ಲಿರುವರು.
ಪ್ರತಿಫಲ ದಿನದಂದು ಅವರು ಅದನ್ನು ಪ್ರವೇಶಿಸುವರು.
ಅವರಿಗೆ ಅದರಿಂದ ಅನುಪಸ್ಥಿತರಾಗಲು ಸಾಧ್ಯವಾಗುವುದಿಲ್ಲ.
ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?
ಪುನಃ (ಕೇಳುತ್ತೇನೆ). ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?
ಅಂದು ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಾಗಿ ಏನೂ ಅಧೀನದಲ್ಲಿಟ್ಟುಕೊಳ್ಳುವುದಿಲ್ಲ! ಅಂದು ಎಲ್ಲಾ ಆಜ್ಞೆಗಳು ಅಲ್ಲಾಹನದ್ದಾಗಿರುವುದು.