عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Sundering, Splitting Open [Al-Inshiqaq] - Kannada translation

Surah The Sundering, Splitting Open [Al-Inshiqaq] Ayah 25 Location Maccah Number 84

ಆಕಾಶವು ಒಡೆದು ಸೀಳುವಾಗ.

ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.[1]

ಭೂಮಿಯು ವಿಸ್ತರಿಸಲಾಗುವಾಗ.

ಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ.

ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.

ಓ ಮನುಷ್ಯನೇ! ನೀನು ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ತನಕ ಎಲ್ಲಾ ರೀತಿಯ ಕಠಿಣ ಪರಿಶ್ರಮ ಮಾಡಿ ನಂತರ ಅವನನ್ನು ಭೇಟಿಯಾಗುವೆ.

ಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುತ್ತದೋ,

ಅವನನ್ನು ಅತ್ಯಂತ ಸರಳವಾಗಿ ವಿಚಾರಣೆ ಮಾಡಲಾಗುವುದು.

ಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು.

ಆದರೆ ಯಾರಿಗೆ ಅವನ ಗ್ರಂಥವನ್ನು ಬೆನ್ನ ಹಿಂದಿನಿಂದ ನೀಡಲಾಗುತ್ತದೋ.

ಅವನು ಸಾವನ್ನು ಕರೆಯುವನು.

ಮತ್ತು ಧಗಧಗನೆ ಉರಿಯುವ ನರಕಾಗ್ನಿಯನ್ನು ಪ್ರವೇಶಿಸುವನು.

ನಿಶ್ಚಯವಾಗಿಯೂ ಅವನು (ಇಹಲೋಕದಲ್ಲಿ) ಅವನ ಮನೆಯವರೊಡನೆ ಸಂತೋಷವಾಗಿದ್ದನು.

ಅಲ್ಲಾಹನ ಬಳಿಗೆ ಮರಳಿ ಹೋಗುವುದೇ ಇಲ್ಲವೆಂದು ಅವನು ಭಾವಿಸಿದ್ದನು.

ಹೌದು! ನಿಶ್ಚಯವಾಗಿಯೂ ಅವನ ಪರಿಪಾಲಕನು (ಅಲ್ಲಾಹು) ಅವನನ್ನು ನೋಡುತ್ತಿದ್ದನು.

ನಾನು ಮುಸ್ಸಂಜೆಯ ಮೇಲೆ ಆಣೆ ಮಾಡುತ್ತೇನೆ.

ರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1]

ಚಂದ್ರನ ಮೇಲಾಣೆ! ಅದು ಪೂರ್ಣರೂಪವನ್ನು ಪಡೆಯುವಾಗ.

ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1]

ಅವರಿಗೇನಾಗಿದೆ? ಅವರೇಕೆ ವಿಶ್ವಾಸವಿಡುವುದಿಲ್ಲ?

ಅವರಿಗೆ ಕುರ್‌ಆನನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುವುದಿಲ್ಲ.

ಆದರೆ ಆ ಸತ್ಯನಿಷೇಧಿಗಳು ನಿಷೇಧಿಸುತ್ತಿದ್ದಾರೆ.

ಅವರು ಅವರ ಒಡಲಲ್ಲಿ ಮುಚ್ಚಿಡುವುದನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿಯುತ್ತಾನೆ.

ಅವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ನೀಡಿರಿ.

ಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.