عربيEnglish

The Noble Qur'an Encyclopedia

Towards providing reliable exegeses and translations of the meanings of the Noble Qur'an in the world languages

The Most High [Al-Ala] - Kannada translation

Surah The Most High [Al-Ala] Ayah 19 Location Maccah Number 87

ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ.

ಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು,

(ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು,

ಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು,

ನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು.

ನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ.

ಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ.

ನಾವು ನಿಮಗೆ ಸುಲಭ ಮಾಡಿಕೊಡುವೆವು.

ಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ.

ಭಯಪಡುವವನು ಉಪದೇಶವನ್ನು ಸ್ವೀಕರಿಸುವನು.

ನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು.

ಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು.

ನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ.

ನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು.

ತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.

ಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.

ಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ.

ಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ.

ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.